ಕೊಂಕಣಿ ರೈಲ್ವೆ ಭಾರತೀಯ ರೈಲ್ವೆ ಅಂಗಸಂಸ್ಥೆಯ ವಲಯವಾಗಿದೆ. ಇದು ಭಾರತೀಯ ರೈಲ್ವೆಯ 17 ವಲಯಗಳಲ್ಲಿ ಒಂದಾಗಿದೆ.ಆದರೆ ಇತರ ರೈಲ್ವೆ ವಲಯಗಳಂತೆ ವಿಭಾಗಗಳನ್ನು ಹೊಂದಿಲ್ಲ.ಇದರ ಕೇಂದ್ರ ಕಚೇರಿ ಕೊಂಕಣಿ ರೈಲ್ವೆ ನಿಗಮ, ನವಿ ಮುಂಬಯಿ, ಮಹಾರಾಷ್ಟ್ರದಲ್ಲಿದೆ . ಮಂಗಳೂರನ್ನು ಮುಂಬಯಿಯೊಂದಿಗೆ ಜೋಡಿಸುವ ಪ್ರಮುಖ ಸಂಪರ್ಕ ಸಾಧನವಾಗಿದೆ. == ಕೊಂಕಣಿ ರೈಲ್ವೆ ಬಗ್ಗೆ == ಕರಾವಳಿಯ ಸಮುದ್ರ ತೀರದಲ್ಲಿ ಸಾಗುವ ಈ ರೈಲು ಹಳಿ,ಹಲವಾರು ಗುಹೆಗಳ ಮೂಲಕ ಸಾಗುತ್ತಾ ಅತ್ಯಂತ ರಮಣೀಯವಾಗಿದೆ.ಸುಮಾರು ೨೦೦೦ ಸೇತುವೆಗಳು,೯೧ ಸುರಂಗಗಳನ್ನೊಳಗೊಂಡ ಈ ರೈಲು ಹಳಿಯ ನಿರ್ಮಾಣ ಈ ಶತಮಾನದಲ್ಲಿ,ಭಾರತೀಯ ಉಪಖಂಡದಲ್ಲಿ ಕೈಗೊಂಡ ಯೋಜನೆಗಳಲ್ಲಿಯೇ ಅತ್ಯಂತ ಕಷ್ಟಕರವಾದ ಹಾಗೂ ದೊಡ್ಡ ಯೋಜನೆಯಾಗಿದೆ. == ಆಧುನೀಕರಣ == ಕೊಂಕಣ ರೈಲ್ವೆ ಮಾರ್ಗದ 17 ಸ್ಟೇಶನ್‌‌ಗಳಲ್ಲಿ ಸಿಸಿಟಿವಿ ಕ್ಯಾಮರಾ ಕಣ್ಗಾವಲು ಸೌಲಭ್ಯ ಒದಗಿಸಿದ್ದು, ಅಪರಾಧ ಚಟುವಟಿಕೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. 4 ರೈಲ್ವೆ ನಿಲ್ದಾಣಗಳಲ್ಲಿ ಎಟಿಎಂ ವ್ಯವಸ್ಥೆ ಇದೆ .ಮತ್ತು ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಶೆಲ್ಟರ್ ಮತ್ತು ಆಸನ ವ್ಯವಸ್ಥೆ ಮಾಡಲಾಗಿದೆ. == ಒಪ್ಪಂದ == ಇಂಡಿಯನ್ ರೈಲ್ವೆ ಮತ್ತು ಕೊಂಕಣ ರೈಲ್ವೆ ಹಲವು ಹೊಸ ರೈಲುಗಳನ್ನು ಓಡಿಸಲು ಒಪ್ಪಂದ ಮಾಡಿಕೊಂಡಿವೆ. ಮೂರು ಹೊಸ ರೈಲು ಸಂಚಾರಕ್ಕೆ ಈ ಒಪ್ಪಂದ ನಡೆದಿದೆ. ನಿಜಾಮುದ್ದೀನ್‌‌-ಗೋವಾ ಮಧ್ಯೆ ವಾರಕ್ಕೊಮ್ಮೆ ರಾಜಧಾನಿ ಎಕ್ಸಪ್ರೆಸ್ ರೈಲು ಸಂಚರಿಸಲಿದೆ. ಮಡಗಾಂವ್-ಎಲ್ಟಿಟಿ ಡಬ್ಬಲ್ ಡೆಕ್ಕರ್ ಟ್ರೇನ್ ಹಾಗೂ ಇಂಧೋರ್-ಕುಚವೇಲಿ ಮಧ್ಯೆ ಎಕ್ಸಪ್ರೆಸ್ ರೈಲು ಸಂಚಾರಕ್ಕೆ ಒಪ್ಪಂದಗಳಾಗಿವೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == . 2009-03-27 ವೇಬ್ಯಾಕ್ ಮೆಷಿನ್ ನಲ್ಲಿ. () 2016-03-12 ವೇಬ್ಯಾಕ್ ಮೆಷಿನ್ ನಲ್ಲಿ. - -